ಲಾಕ್ ಡೌನ್ ಮುಂದುವರಿಕೆಯಾಗಬೇಕು

ಬೆಂಗಳೂರು : ಈಗ ಕೇಸ್ ಕಡಿಮೆ ಆಗ್ತಿದೆ. ಹೀಗಾಗಿ ಲಾಕ್ ಡೌನ್ ಮುಂದುವರಿಸಿದ್ರೆ ಮತ್ತಷ್ಟು ಅನುಕೂಲ ಆಗುತ್ತೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ನೂತನ ಟ್ರಯಾಜ್ ಮತ್ತು ಕೋವಿಡ್ ಸ್ಥಿರೀಕರಣ ಘಟಕ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪರವರಿಗೂ ಈ ಬಗ್ಗೆ ಮನವರಿಕೆ ಮಾಡ್ತೀವಿ. ನಾನು ಬೆಂಗಳೂರು ನಾಗರೀಕನಾಗಿ ಲಾಕ್ ಡೌನ್ ಮುಂದುವರಿಕೆ ಆಗಬೇಕು ಅಂತ ಹೇಳ್ತೀನಿ. ನಾವು ಲಾಕ್ ಡೌನ್ ಬೇಕು ಅಂತ ಸಿಎಂಗೆ ಸಲಹೆ ಮಾಡ್ತೀವಿ. ಮಹಾರಾಷ್ಟ್ರ, ದೆಹಲಿ ಪ್ರಕರಣ ನಮ್ಮ ಮುಂದಿದೆ. ಅಲ್ಲಿ ಮೊದಲ ಅಲೆ ಬಂತು. ಅವರು ಲಾಕ್ ಡೌನ್ ವಿಸ್ತರಣೆ ಮಾಡಿದ್ರು. ಅದನ್ನ ನಾವು ಅನುಸರಿಸುತ್ತೇವೆ ಎಂದರು.

NEWS DESK

TIMES OF BENGALURU