ಸೆಕೆಂಡ್ ಪಿಯುಸಿ ಎಕ್ಸಾಂ ನಡೆಯೋದು ಡೌಟ್.?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಅಬ್ಬರಿಸುತ್ತಿದೆ. ಮೂರನೇ ಅಲೆಯ ಭೀತಿ ಕೂಡ ಎದುರಾಗಿದೆ. ಈ ಸಂದರ್ಭದಲ್ಲಿ ಸೋಂಕಿನಿಂದ ವಿದ್ಯಾರ್ಥಿಗಳ ರಕ್ಷಣೆಯ ಸಲುವಾಗಿ, ಈಗಾಗಲೇ ನಿಗದಿಯಾಗಿದ್ದಂತ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಈಗ ಅಬ್ಬರಿಸುತ್ತಿರುವಂತ ಕೊರೋನಾ 2ನೇ ಅಲೆಯ ನಂತ್ರ 3ನೇ ಅಲೆಯಿಂದಾಗಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಈ ವರ್ಷ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ನಡೆಯೋದು ಡೌಟ್ ಎನ್ನಲಾಗುತ್ತಿದೆ.

NEWS DESK

TIMES OF BENGALURU