ಕೊರೋನಾ ರೂಲ್ಸ್ ಬ್ರೇಕ್: 448 ವಾಹನಗಳು ಜಪ್ತಿ

ಬೆಂಗಳೂರು: ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಅನೇಕ ಮಂದಿ ನಿಯಮಗಳನ್ನು ಉಲ್ಲಂಘಿಸಿ ಎಲ್ಲೆಡೆ ಸಂಚರಿಸುತ್ತಿದ್ದಾರೆ. ನಿಯಮ ಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಜಪ್ತಿ ಮಾಡಿದ್ದು, ಅಲ್ಲದೆ 3.26 ಕೋಟಿ ರೂ. ದಂಡ ಸಂಗ್ರಹಣೆ ಮಾಡಿದ್ದಾರೆ. ಕಳೆದ 20 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ 448 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 429 ದ್ವಿಚಕ್ರ ವಾಹನ, 11 ತ್ರಿಚಕ್ರ ವಾಹನ, 8 ನಾಲ್ಕು ಚಕ್ರದ ವಾಹನ ಸೇರಿ ಒಟ್ಟು 448 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ .

NEWS DESK

TIMES OF BENGALURU