ಕೊರೊನಾ ವೈರಸ್ ಭೀತಿಯ ನಡುವೆಯೇ ನಟ ಚಂದನ್ ಕುಮಾರ್ ಮತ್ತು ಕವಿತಾ ಗೌಡ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಲಾಕ್ಡೌನ್ ನಿಯಮದಂತೆ ಸರಳವಾಗಿ ವಿವಾಹ ಮಾಡಿಕೊಂಡಿರುವ ನವಜೋಡಿಗಳು ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಕವಿತಾ ಗೌಡ ಅವರಿಗೆ ಚಂದನ್ ಕುಮಾರ್ ಮಾಂಗಲ್ಯಧಾರಣೆ ಮಾಡುತ್ತಿರುವ ಫೋಟೋ ಶೇರ್ ಮಾಡಿರುವ ಇಬ್ಬರು ಮನೆ ಮದುವೆ, ಮದುವೆ ಮನೆ. ಗ್ಲೋರಿಯಸ್ ಆಗಿಲ್ಲ, ಆದರೆ ಸಂತಸದಿಂದ ಕೂಡಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ನವಜೋಡಿಗಳಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.
NEWS DESK
TIMES OF BENGALURU