ಭರವಸೆಯನ್ನು ಕಳೆದುಕೊಳ್ಳಬೇಡಿ ನಿಮ್ಮೊಂದಿಗೆ ನಾನಿದ್ದೇನೆ

ಬೆಂಗಳೂರು: ಕೋವಿಡ್ ಸೋಂಕಿತರ ಜೀವ ಉಳಿಸಲು ದೇಶದಾದ್ಯಂತ ನಟ ಸೋನು ಸೂದ್ ಅವರ ‘ಸೂದ್ ಫೌಂಡೇಶನ್’ ಹಗಲಿರುಳು ಕೆಲಸ ಮಾಡುತ್ತಿದೆ. ಭಾರತ ದೇಶದ ಯಾವುದೇ ಮೂಲೆಯಿಂದ ಬೆಡ್, ಆಕ್ಸಿಜನ್, ಔಷಧ, ಆಸ್ಪತ್ರೆಬೇಕೆಂದು ಯಾರೇ ಸಹಾಯ ಕೋರಿ ಸಂದೇಶ ಕಳುಹಿಸಿದರೂ, ತಕ್ಷಣ ಪ್ರತಿಕ್ರಿಯಿಸಿ ಸಹಾಯ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಉಂಟಾದ ಆಕ್ಸಿಜನ್ ಕೊರತೆಯನ್ನು ನೀಗಿಸಲು ನಟ ಸೋನು ಸೂದ್ ಅವರು ಮುಂದಾಗಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು, ಭರವಸೆಯನ್ನು ಕಳೆದುಕೊಳ್ಳಬೇಡಿ, ಜೀವಂತವಾಗಿಟ್ಟುಕೊಳ್ಳಿ.. ನಾನು ನಿಮ್ಮೊಂದಿದ್ದೇನೆ. ತುರ್ತು ಸನ್ನಿವೇಶಗಳಲ್ಲಿ ಮನೆ ಬಾಗಿಲಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ಸೋನು ಸೂದ್ ತಿಳಿಸಿದ್ದು, ಆಕ್ಸಿಜನ್ ಕೋರಿಕೆ ಸಲ್ಲಿಸಲು ವಾಟ್ಸಪ್ ನಂಬರ್ ಕೂಡ ಹಂಚಿಕೊಂಡಿದ್ದಾರೆ.

NEWS DESK

TIMES OF BENGALURU