ಜನರ ಪರವಾಗಿ ಹೋರಾಟ ಮಾಡುತ್ತೇವೆ

ಬೆಂಗಳೂರು : ಲಸಿಕೆ ಕೇಳಿದರೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ನೇಣುಹಾಕಿಕೊಳ್ಳಬೇಕಾ ಎಂದು ಕೇಳುತ್ತಾರೆ. ಹಾಗಾದ್ರೆ ಜನ ನೇಣು ಹಾಕಿಕೊಳ್ಳಬೇಕಾ ಹೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಸದಾನಂದಗೌಡರು ನೇಣುಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.

ಲಸಿಕೆ ಕೇಳಿದರೆ ನೇಣುಹಾಕಿಕೊಳ್ಳಬೇಕಾ ಎನ್ನುತ್ತೀರಿ. ಹಾಗಾದರೆ ಲಸಿಕೆ ಸಿಗುತ್ತಿಲ್ಲ, ಜನ ನೇಣು ಹಾಕಿಕೊಳ್ಳಬೇಕಾ. ನೀವು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾಗಿದ್ದೀರಿ. ನಿಮ್ಮನ್ನಲ್ಲದೆ ಯಾರನ್ನು ಕೇಳಬೇಕು? ಸಾವಿನ ಮೆರವಣಿಗೆ ನಡೆಯುತ್ತಿದೆ ಎಂದು ಕಿಡಿಕಾರಿದರು.ನಾವು ಸುಮ್ಮನೆ ಬಿಡುವುದಿಲ್ಲ, ಜನರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ನಮ್ಮ ಕ್ಷೇತ್ರಗಳ ಬೇರೆ ಕೆಲಸಗಳನ್ನು ನಿಲ್ಲಿಸಲು ಸಿದ್ಧರಿದ್ದೇವೆ. ಎಲ್ಲ ಶಾಸಕರು, ಸಂಸದರು ಸೇರಿ 100 ಕೋಟಿ ಪ್ರದೇಶಾಭಿವೃದ್ಧಿ ನಿಧಿಯನ್ನು ಕೊರೊನಾ ಲಸಿಕೆ ಕೊಳ್ಳಲು ನೀಡುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

NEWS DESK

TIMES OF BENGALURU