ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ

ತಮ್ಮ ಅದ್ಭುತ ನಟನೆ, ನೃತ್ಯ ಶೈಲಿಯಿಂದ ದಕ್ಷಿಣ ಭಾರತ ಸಿನಿಪ್ರೇಮಿಗಳ ಮನಸ್ಸು ಗೆದ್ದಿರುವ ನಟಿ ಸಾಯಿ ಪಲ್ಲವಿ ಇದೀಗ ಬಾಲಿವುಡ್‌ಗೆ ಪಯಣ ಬೆಳೆಸಿದ್ದಾರೆ. ಮಲಯಾಳಂ ಸಿನಿಮಾ ‘ಪ್ರೇಮಂ’ದಿಂದ ನಾಯಕಿಯಾಗಿ ಪರಿಚಯಿಸಲ್ಪಟ್ಟ ಈ ತಮಿಳು ಸುಂದರಿ ಆ ನಂತರ ಹಿಂತುರಿಗಿ ನೋಡಿದ್ದೇ ಇಲ್ಲ. ಸವಾಲೆನಿಸುವ ಪಾತ್ರಗಳನ್ನು ಆರಿಸಿಕೊಂಡು ಅದ್ಭುತ ಪ್ರದರ್ಶನ ನೀಡಿ ಗೆದ್ದಿದ್ದಾರೆ ಸಾಯಿ ಪಲ್ಲವಿ. ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ಇದ್ದರೂ ಸಹ ಮಧ್ಯದಲ್ಲಿಯೇ ಬಾಲಿವುಡ್‌ಗೆ ಹಾರಿದ್ದಾರೆ ಸಾಯಿ ಪಲ್ಲವಿ. ತೆಲುಗಿನ ಹಿಟ್ ಸಿನಿಮಾ ಒಂದು ಹಿಂದಿಗೆ ರೀಮೇಕ್ ಆಗುತ್ತಿದ್ದು ಆ ಸಿನಿಮಾಕ್ಕೆ ಸಾಯಿ ಪಲ್ಲವಿ ನಾಯಕಿ.

NEWS DESK

TIMES OF BENGALURU