ಬೆಂಗಳೂರು :ರಾಜ್ಯದ ಜನರು ಮಹಾ ಮಾರಿ ಕೊರೊನಾ ಸಂಕಷ್ಟದಲ್ಲಿರುವಾಗ ಸಡಗರ, ಸಂಭ್ರಮದಿಂದ ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಬಹಿರಂಗ ಪತ್ರ ಬರೆದು ಮನವಿ ಮಾಡಿರುವ ಗೌಡರು, ಕೋವಿಡ್ ಸಂದರ್ಭದಲ್ಲಿ ನಾವು ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆ ತೋರಿಸಬೇಕು. ಮೇ 18ರಂದು ನನ್ನ ಹುಟ್ಟುಹಬ್ಬದಂದು ಹಾರ, ತುರಾಯಿ, ಕೇಕ್, ಸಿಹಿಗಾಗಿ ಅನಗತ್ಯ ದುಂದುವೆಚ್ಚ ಮಾಡುವ ಬದಲಿಗೆ ನಿಮ್ಮ ನಿಮ್ಮ ಭಾಗದ ಕೊರೊನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯಗಳ ಪೂರೈಕೆಗೆ ಬಳಸಿದರೆ, ಅದು ನಿಜಕ್ಕೂ ಸದುಪಯೋಗವಾಗಲಿದೆ ಎಂದಿದ್ದಾರೆ.
NEWS DESK
TIMES OF BENGALURU