ಬೀದಿ ನಾಯಿಗಳ ಅಟ್ಟಹಾಸಕ್ಕೆ ವೃದ್ಧೆ ಬಲಿ

ಬೆಂಗಳೂರು : ಸಾಕು ನಾಯಿಯೊಂದು ಗಾರೆ ಕೆಲಸಗಾರರೊಬ್ಬರನ್ನು ಬಲಿ ತೆಗೆದುಕೊಂಡ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಬೀದಿ ನಾಯಿಗಳ ಹಿಂಡೋಂದು ಮಹಿಳೆಯೊಬ್ಬರನ್ನು ಮನಬಂದಂತೆ ಕಚ್ಚಿ ಕೊಂದು ಹಾಕಿರುವ ಮನ ಕಲಕುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ದ್ವಾರಕಾ ನಗರದ ಶಶಿಧರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬೀದಿ ನಾಯಿಗಳ ದಾಳಿಗೆ ಬಲಿಯಾಗಿರುವ ಮಹಿಳೆ 55 ರಿಂದ 61 ವರ್ಷದವರೆಂದು ಗುರುತಿಸಲಾಗಿದೆ. ಆದರೆ, ಅವರ ಬಗ್ಗೆ ಯಾವುದೆ ಮಾಹಿತಿ ತಿಳಿದುಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NEWS DESK

TIMES OF BENGALURU