ಮೃತಪಟ್ಟ ಶಿಕ್ಷಕರು, ಉಪನ್ಯಾಸಕರ ವರದಿ ತಿಳಿಸಿ

ಬೆಂಗಳೂರು : ಕೋವಿಡ್ ಕಾರ್ಯದಲ್ಲಿ‌ ನಿರತರಾದ ಹಾಗೂ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರು ಸಾವನ್ನಪ್ಪಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಸುರೇಶ್ ಕುಮಾರ್‌ ಈ ಕುರಿತಂತೆ ಕೂಡಲೇ ಶಿಕ್ಷಕವಾರು ವರದಿಯನ್ನು ಮಂಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕಳೆದ ಏಪ್ರಿಲ್ 2021ರಿಂದ ಇಲ್ಲಿಯವರೆಗೆ ಕೋವಿಡ್ ಕಾರಣದಿಂದ‌ ಮೃತಪಟ್ಟ ಶಿಕ್ಷಕರು ಹಾಗೂ ಉಪನ್ಯಾಸಕರ‌ ವಯೋಮಾನ ಸಹಿತವಾಗಿ ಮೃತಪಟ್ಟ ಖಚಿತ ಕಾರಣಗಳೊಂದಿಗೆ ಅತಿ ಶೀಘ್ರದಲ್ಲೇ ತಮಗೆ ವರದಿ ಮಂಡಿಸಬೇಕೆಂದು ಶಿಕ್ಷಣ‌ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿರುವ ಸಚಿವರು, ಇದು ದುರದೃಷ್ಟಕರವಾದ ಸಂಗತಿಯಾಗಿದ್ದು, ಶಿಕ್ಷಕರ ಕುಟುಂಬಗಳ ಬಗ್ಗೆ ತಮ್ಮ ತೀವ್ರವಾದ ಸಂತಾಪವಿದೆ ಎಂದಿದ್ದಾರೆ.

NEWS DESK

TIMES OF BENGALURU