ಇಂದಿನಿಂದ ಸಂಚಾರಿ ಅಪ್ಪಾಜಿ ಕ್ಯಾಂಟೀನ್ ಆರಂಭ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವಂತ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವಂತ ಜನರ ಹಸಿವು ನೀಗಿಸಲು, ಇದೀಗ ಮಾಜಿ ಪರಿಷತ್ ಸದಸ್ಯ ಟಿಎ ಶರವಣ ಮುಂದಾಗಿದ್ದಾರೆ. ಇದಕ್ಕಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹುಟ್ಟು ಹಬ್ಬದ ಸುಸಂದರ್ಭದಲ್ಲಿಯೇ ಸಂಚಾರಿ ಅಪ್ಪಾಜಿ ಕ್ಯಾಂಟೀನ್ ಗೆ ಚಾಲನೆ ನೀಡುತ್ತಿದ್ದಾರೆ.

ಈಗಾಗಲೇ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೇ, ಹಸಿದವರ ಊಟದ ಹಸಿವು ನೀಗಿಸುವ ಸಲುವಾಗಿ, ಬೆಂಗಳೂರಿನ ವಿವಿದೆಡೆಗಳಲ್ಲಿ, ಮಾಜಿ ಪರಿಷತ್ ಸದಸ್ಯ ಟಿ.ಎ.ಶರವಣ, ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದರು. ಈ ಮೂಲಕ ಕಡಿಮೆ ದರದಲ್ಲಿ ಊಟದ ವ್ಯವಸ್ಥೆಯನ್ನು ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದವರಿಗೆ ಮಾಡಿದ್ದರು. ಇದೀಗ ಮುಂದುವರೆದು, ಲಾಕ್ ಡೌನ್ ಸಂದರ್ಭದಲ್ಲಿ, ಸಂಚಾರಿ ಅಪ್ಪಾಜಿ ಕ್ಯಾಂಟೀನ್ ಶುರು ಮಾಡುತ್ತಿದ್ದಾರೆ.

NEWS DESK

TIMES OF BENGALURU