ಬೆಂಗಳೂರು : ಸರ್ಕಾರದ ಬೇಜವಾಬ್ದಾರಿತನದಿಂದ ಕೊರೊನಾ ಲಸಿಕೆಯ ಕೊರತೆ ಉಂಟಾಗಿದೆ. ಎಲ್ಲಿಂದಲಾದರೂ ಲಸಿಕೆ ತಂದು ಜನರಿಗೆ ಕೊಡಿ, ಸದ್ಯದ ಪರಿಸ್ಥಿತಿಯಲ್ಲಿ ಅದೊಂದೇ ಪರಿಹಾರ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 18 ರಿಂದ 44 ವರ್ಷದವರಿಗೆ ಲಸಿಕೆ ಕೊಡುವುದನ್ನು ನಿಲ್ಲಿಸಿದ್ದಾರೆ. ಈ ವಯೋಮಾನದವರಿಗೆ ಇನ್ನೂ 2 ತಿಂಗಳ ವರೆಗೆ ಲಸಿಕೆ ಸಿಗಲ್ಲ ಎಂದರು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಲಸಿಕೆ ಹಾಕುವುದೇ ಪರಿಹಾರ. ಲಸಿಕೆ ಹಾಕಿದರೆ ಶೇ.80ರಷ್ಟು ಸೋಂಕನ್ನು ತಡೆ ಗಟ್ಟಲು ಸಾಧ್ಯ. ರಾಜ್ಯ ಸರ್ಕಾರ ಎಲ್ಲಿಂದಲಾದರೂ ಲಸಿಕೆ ತರಿಸಿ ಜನರಿಗೆ ಕೊಡಬೇಕು ಎಂದು ಆಗ್ರಹಿಸಿದರು.
NEWS DESK
TIMES OF BENGALURU