ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಮಾಡಿದ್ದು,ಸೋಂಕಿತರು ಕಡ್ಡಾಯವಾಗಿ ಪ್ರಾಥಮಿಕ ಚಿಕಿತ್ಸೆ ಕೇಂದ್ರದ ಕೋವಿಡ್ ರ್ಸೆಂಟರ್ ಗೆ ಸೋಂಕಿತ ದಾಖಲಾಗಬೇಕು. ಹೋಂ ಐಸೋಲೇಶನ್ ನಲ್ಲಿ ಕೋವಿಡ್ ನಿಯಮ ಪಾಲನೆ ಆಗದಿರುವ ಕಾರಣ,ಸೋಂಕು ತಡೆಗೆ ಸರ್ಕಾರ ಈ ದಿಟ್ಟ ಕ್ರಮ ತೆಗೆದುಕೊಂಡಿದೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇನ್ನು ಮುಂದೆ ಪ್ರತ್ಯೇಕ ಕೊಠಡಿ, ಶೌಚಾಲಯದ ವ್ಯವಸ್ಥೆ ಇಲ್ಲದೆ ಇರೋರಿಗೆ ಹೋಂ ಐಸೋಲೇಶನ್ ಇರುವುದಿಲ್ಲ.ಪ್ರತ್ಯೇಕ ಕೊಠಡಿ, ಶೌಚಾಲಯ, ವ್ಯವಸ್ಥೆ ಇದ್ದರೆ ಮಾತ್ರ ಹೋಂ ಐಸೋಲೇಶನ್ ಗೆ ಅವಕಾಶ ಎಂದು ಸ್ಪಷ್ಟಪಡಿಸಿದರು.
NEWS DESK
TIMES OF BENGALURU