ಮೊಬೈಲ್ ಕ್ಲಿನಿಕ್ ಮೂಲಕ ಕೋವಿಡ್ ಟೆಸ್ಟ್

ಬೆಂಗಳೂರು ಗ್ರಾಮಾಂತರ; ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ 19 ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷೆ ಕೈಗೊಳ್ಳುವ ವೈದ್ಯಾಧಿಕಾರಿಗಳ ತಂಡವಿರುವ ಮೊಬೈಲ್ ವಾಹನಗಳು ಹಳ್ಳಿಗಳಿಗೆ ತೆರಳಲಿದ್ದು, ಈ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪರಿಣಾಮ ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಆತಂಕಿತಗೊಂಡಿದ್ದು, ಅವರ ಆರೋಗ್ಯ ಕಾಳಜಿ ಮತ್ತು ಅವರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ವೈದ್ಯರ ನಡಿಗೆ ಹಳ್ಳಿ ಕಡೆಗೆ ಎಂಬ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನ ಪರಿಚಯಿಸಲಾಗಿದೆ. ಈ ಮೂಲಕ ವಾರದಲ್ಲಿ ಮೂರು ದಿನ ವೈದ್ಯರು ಮತ್ತವರ ತಂಡ ಹಳ್ಳಿಗಳಿಗೆ ಬೇಟಿ ನೀಡಿ ಗ್ರಾಮಸ್ಥರ ಆರೋಗ್ಯ ಪರೀಕ್ಷೆ ನಡೆಸಲಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಮೈಕೈನೋವು ಸೇರಿದಂತೆ ಸಾಮಾನ್ಯ ಆರೋಗ್ಯ ಪರೀಕ್ಷೆ ನಡೆಸಿ ಸೂಕ್ತ ಸಲಹೆ ಕೊಡುವುದರ ಜೊತೆಗೆ ಔಷಧೋಪಚಾರ ನೀಡಲಿದ್ದಾರೆ ಎಂದರು.

NEWS DESK

TIMES OF BENGALURU