ಕೊಟ್ಟ ಮಾತಿನಂತೆ ನಡೆದುಕೊಂಡ ಶುಭಾ ಪೂಂಜಾ

ಸ್ಯಾಂಡಲ್​ವುಡ್​​ನ ಮೊಗ್ಗಿನ ಮನಸಿನ ಹುಡುಗಿ ಶೂಭಾಪೂಂಜಾ ಬಿಗ್​ ಬಾಸ್​ನಿಂದ ಹೊರಬಂದ್ಮೇಲೆ ಕೊರೊನ ವಾರಿಯರ್ ಆಗಿ ಫೀಲ್ಡ್​​ಗಿಳಿದಿದ್ದಾರೆ. ಕೊಟ್ಟ ಮಾತಿನಂತೆ ಸಂಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಿದ್ದಾರೆ. ಬಿಗ್​ಬಾಸ್​ ಮನೆಯಿಂದ ಹೊರಬರುವ ಮುನ್ನ ಎಲ್ಲಾ ಸ್ಪರ್ಧಿಗಳು ತಮ್ಮ ಕೈಲಾದ ಸಹಾಯ ಮಾಡೋದಾಗಿ ಹೇಳಿದರು. ಹೊರಗೆ ಬರ್ತೀದ್ದ ಹಾಗೇ ಕೊರೊನ ವಾರಿಯರ್ಸ್​ ಆಗಿ ನೆರವಾಗೋದಾಗಿ ತಿಳಿಸಿದರು.

ಅದರಂತೆ ಮೊದಲ ಹೆಜ್ಜೆ ಇಟ್ಟಿದ್ದಾರೆ ಶುಭಾಪೂಂಜಾ. ತಮ್ಮ ಮನೆಯ ಹತ್ತಿರವೇ ಇರುವ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ಹಂಚುವ ಮೂಲಕ ನೆರವಿನ ಕಾರ್ಯ ಶುರುಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜನರನ್ನ ತಲುಪಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಶುಭಾಪೂಂಜಾ, ನೀವೂ ಕೂಡ ನಿಮ್ಮ ಏರಿಯಾಗಳಲ್ಲಿ ಸಹಾಯ ಮಾಡಲು ಪ್ರಯತ್ನಿಸಿ ಹಾಗೂ ಪ್ರಾಣಿಗಳಿಗೆ ಆಹಾರವನ್ನ ಒದಗಿಸಿ ಅಂತ ಮನವಿ ಮಾಡಿದ್ದಾರೆ.

NEWS DESK

TIMES OF BENGALURU