ಆಸ್ಪತ್ರೆಗಳಲ್ಲಿ ಐಸಿಯು ಬೆಡ್‍ಗೆ ನಿಲ್ಲದ ಪರದಾಟ..!!

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಬೆಡ್ ಸಮಸ್ಯೆ ನಿವಾರಣೆಯಾಗಿದೆ. ಆದರೆ, ಐಸಿಯು ಬೆಡ್‍ಗಳು ಮಾತ್ರ ಗಗನ ಕುಸುಮವಾಗಿ ಮುಂದುವರೆದಿದೆ. ಇನ್ನೂ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ಗಳನ್ನು ಶೇ.50 ರಷ್ಟು ಆಕ್ಸಿಜನ್ ಬೆಡ್‍ಗಳನ್ನಾಗಿ ಪರಿವರ್ತಿಸುವುದರ ಜೊತೆಗೆ ಟ್ರಯಾಜ್ ಕೇಂದ್ರಗಳನ್ನು ಹೆಚ್ಚಳ ಮಾಡಿರುವುದರಿಂದ ಬೆಡ್ ಸಮಸ್ಯೆ ನಿವಾರಣೆಯಾಗಿದೆ.

ಈ ಹಿಂದೆ ಸ್ಥಾಪಿಸಲಾಗಿದ್ದ 26 ಟ್ರಯಾಜ್ ಸೆಂಟರ್‍ಗಳ ಜೊತೆಗೆ ಇನ್ನು 6 ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೀಗಾಗಿ ಜನ ನೇರವಾಗಿ ಟ್ರಯಾಜ್ ಸೆಂಟರ್ ಗಳಿಗೆ ಭೇಟಿ ನೀಡಿ ಸೋಂಕಿನ ತೀವ್ರತೆ ಪರಿಶೀಲಿಸಿಕೊಂಡು ಹೋಗುತ್ತಿದ್ದಾರೆ.ಟ್ರಯಾಜ್ ಕೇಂದ್ರಗಳಲ್ಲಿ 2486 ಹಾಸಿಗೆಗಳಿದ್ದು ತಪಾಸಣೆಗೆ ಬರುವವರನ್ನು ವೈದ್ಯರು ಪರಿಶೀಲಿಸಿ ಅವಶ್ಯಕತೆ ಇದ್ದವರಿಗೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿ ಉಳಿದವರಿಗೆ ಮನೆಗಳಲ್ಲೇ ಕ್ವಾರಂಟೈನ್ ಆಗುವಂತೆ ಸಲಹೆ ನೀಡಲಾಗುತ್ತಿದೆ.

NEWS DESK

TIMES OF BENGALURU