ಬೆಡ್ ಸಿಕ್ಕಿದ್ದರೆ ನಮ್ಮ ಅಮ್ಮ ಬದುಕುತ್ತಿದ್ದರು

ಬೆಂಗಳೂರು: ನಮ್ಮ ತಾಯಿ ಸಾವಿಗೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ. ನಮ್ಮ ತಾಯಿಯ ಜೀವವನ್ನೇ ಕಸಿದುಕೊಂಡು ನಮ್ಮನ್ನು ಅನಾಥರನ್ನಾಗಿ ಮಾಡಿದ್ದಾರೆ. ಬಿಬಿಎಂಪಿಗೆ ನೂರು ಸಲ ಕರೆ ಮಾಡಿದ್ರೂ ಯಾರೂ ರೆಸ್ಪಾಂಡ್ ಮಾಡಲಿಲ್ಲ. ಬೆಡ್ ಸಿಕ್ಕಿದ್ದರೆ ನಮ್ಮ ಅಮ್ಮ ಬದುಕುತ್ತಿದ್ದರು.

ಕೊರೊನಾ ಸೋಂಕಿಗೆ ತಾಯಿಯನ್ನು ಕಳೆದುಕೊಂಡಿರುವ ಅನಾಥ ಹೆಣ್ಣುಮಕ್ಕಳ ಕಣ್ಣೀರಿನ ಕಥೆಯಿದು. ಕೊರೊನಾ ಸೋಂಕಿತರಿಗೆ ಬೆಡ್ ಸೌಲಭ್ಯ ಕಲ್ಪಿಸಲು ಟೆಂಡರ್ ಗುತ್ತಿಗೆ ಮಾದರಿಯ ನಿರ್ಬಂಧಗಳನ್ನು ವಿಧಿಸಿದ ಪರಿಣಾಮ ಇಂಥ ಎಷ್ಟೋ ಮುಗ್ಧ ಜೀವಗಳು ಪ್ರಾಣ ಕಳೆದುಕೊಂಡಿವೆ. ಬಿಯು ನಂಬರ್, ಎಸ್‍ಆರ್‍ಎಫ್ ನಂಬರ್ ಇದ್ದರೆ ಮಾತ್ರ ಹಾಸಿಗೆ ಕೊಡ್ತೀವಿ ಎನ್ನುವ ಕುರುಡು ಕಾನೂನುಗಳು ಅದೆಷ್ಟು ಜೀವಗಳನ್ನು ಬಲಿ ಪಡೆದಿದೆಯೋ ಲೆಕ್ಕ ಹಾಕಲು ಅಸಾಧ್ಯ. ಈಗಲೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ ಎಂದು ಅಕ್ರೋಶ ಹೊರಹಾಕಿದ್ದಾರೆ.

NEWS DESK

TIMES OF BENGALURU