ಬೆಂಗಳೂರಿನ ಕಲ್ಪಳ್ಳಿ ಸ್ಮಶಾನ ಭರ್ತಿ

ಬೆಂಗಳೂರು: ಕೊರೊನಾ ಸೋಂಕಿತರ ಶವವನ್ನು ಅಂತ್ಯಸಂಸ್ಕಾರ ಮಾಡಲು ಪ್ರಾರಂಭಿಸಿ ಒಂದು ತಿಂಗಳೊಳಗಾಗಿ ಕಲ್ಪಳ್ಳಿ ಸ್ಮಶಾನ ಭರ್ತಿಯಾಗಿದೆ. ಇನ್ಯಾವುದೇ ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರ ಮಾಡಲು ಇಲ್ಲಿ ಜಾಗವಿಲ್ಲ, ಕುಟುಂಬದವರು ಈ ಪ್ರದೇಶದಲ್ಲಿ ಕುಟುಂಬದವರು ಪ್ಲಾಟ್ ಹೊಂದಿದ್ದರೆ ಮಾತ್ರ ಅಂತ್ಯ ಸಂಸ್ಕಾರ ಮಾಡಬಹುದು ಇಲ್ಲವಾದಲ್ಲಿ ಕೊರೊನಾ ಸೋಂಕಿತರು ಅಥವಾ ಸೋಂಕು ಇಲ್ಲದೆ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೂ ಜಾಗ ಖಾಲಿ ಇಲ್ಲ.ಜಾಗವಿಲ್ಲದ ಕಾರಣ ಕೊರೊನಾ ಸೋಂಕಿತರ ಶವವನ್ನು ಸ್ವೀಕರಿಸುತ್ತಿಲ್ಲ.

ಏಪ್ರಿಲ್‌ನಿಂದ ಕೊರೊನಾ ಸೋಂಕಿತರ ಶವದ ಅಂತ್ಯ ಸಂಸ್ಕಾರ ಆರಂಭಿಸಿದ್ದರು. 25 ದಿನಗಳಲ್ಲಿಯೇ ಸ್ಮಶಾನದಲ್ಲಿ 250ಕ್ಕೂ ಹೆಚ್ಚು ಶವದ ಅಂತ್ಯಕ್ರಿಯೆ ನಡೆಸಲಾಗಿದೆ, 84 ಎಕರೆ ಸ್ಮಶಾನ ಇದಾಗಿದೆ. ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಆನ್‌ಲೈನ್‌ನಲ್ಲಿ ಬುಕ್ ಬುಕಿಂಗ್ ನಿಲ್ಲಿಸಿದ್ದೇವೆ ಎಂದು ಎಡಿಡಿಎಸ್ ಗ್ರೇವ್ ವರ್ಕರ್ಸ್ ಯೂನಿಯನ್ ರಾಜ್ಯ ಕಾರ್ಯದರ್ಶಿ ರಾಜಾ ಕಲ್ಪಳ್ಳಿ ತಿಳಿಸಿದ್ದಾರೆ.

NEWS DESK

TIMES OF BENGALURU