ನನಗೇನೂ ಆಗಿಲ್ಲ, ಮನೆಯಲ್ಲೇ ಆರಾಮಾಗಿದ್ದೀನಿ

ಬೆಂಗಳೂರು: ಕೆಲವೊಮ್ಮೆ ಸುಳ್ಳುಸುಳ್ಳೇ ವಿಷಯಗಳು ಪೋಸ್ಟ್ ಆಗಿ ವೈರಲ್ ಆಗುವುದಷ್ಟೇ ಅಲ್ಲ, ಸಂಬಂಧ ಪಟ್ಟವರನ್ನು ಎಷ್ಟೋ ಸಲ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತದೆ. ಅಂಥದ್ದೇ ಒಂದು ಸನ್ನಿವೇಶಕ್ಕೆ ನಟ ಕುರಿತ ಪ್ರತಾಪ್ ಒಳಗಾಗಿದ್ದು, ಅವರು ಆ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾವಿನ ಸುಳ್ಳು ಸುದ್ದಿ ಬರ್ತಿದೆ ಅಂತ ತುಂಬ ಜನ ಕರೆ ಮಾಡಿದ್ದರು.

ಅವರಿಗೆಲ್ಲ ಉತ್ತರ ಕೊಟ್ಟು ಕೊಟ್ಟು ಸಾಕಾಯಿತು. ಅದಕ್ಕೆ ವಿಡಿಯೋ ಮಾಡಿ ಸ್ಪಷ್ಟನೆ ನೀಡುತ್ತಿದ್ದೇನೆ ಎಂಬುದಾಗಿ ಕುರಿ ಪ್ರತಾಪ್ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಹಾಗೆಲ್ಲ ಯಾಕೆ ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ, ಚೆನ್ನಾಗಿದ್ದವರಿಗೂ ಹೀಗೆಲ್ಲ ಹಬ್ಬಿಸುತ್ತಾರೆ. ನಾನು ಮನೆಯಲ್ಲಿ ಚೆನ್ನಾಗಿದ್ದೇನೆ. ನನಗೇನೂ ಆಗಿಲ್ಲ, ಮನೆಯಲ್ಲೇ ಆರಾಮಾಗಿದ್ದೀನಿ ನೋಡಿ ಎಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಹಾಗೆಯೇ ಈ ಕರೊನಾ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ.

NEWS DESK

TIMES OF BENGALURU