ಲಸಿಕೆ ಅಭಾವಕ್ಕೆ ಕಾಂಗ್ರೆಸ್ ರಾಜಕಾರಣವೇ ಕಾರಣ

ಬೆಂಗಳೂರು: ದೇಶದಲ್ಲೆಲ್ಲೂ ಲಸಿಕೆ ಅಭಾವದ ಹಿಂದೆ ಕಾಂಗ್ರೆಸ್ ನಾಯಕರ ಸಣ್ಣತನದ ರಾಜಕಾರಣವೂ ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ನೂರು ಕೋಟಿ ಲಸಿಕೆಕಾಗಿ ದುಡ್ಡು ಕೊಡುತ್ತೇನೆ ಎಂದು ಹೇಳುವ ಕಾಂಗ್ರೆಸ್ ನಾಯಕರು, ಮನೆಯಿಂದ ದುಡ್ಡು ತಂದು ಕೊಡುವುದಿಲ್ಲ.

ಇವರಿಗೆ ಸರಕಾರದಿಂದ ಸಿಗುತ್ತಿರುವ ಫಂಡ್ ನಿಂದ ಕೊಡಲು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು. ಇದೇ ಕಾಂಗ್ರೆಸ್ಸಿನ ನಾಯಕರು ಲಸಿಕೆ ಕಂಡು ಹಿಡಿದಂತಹ ಸಂದರ್ಭದಲ್ಲಿ ಮತ್ತು ಕೇಂದ್ರ ಸರಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಹೋದಾಗ, ಇದು ವ್ಯಾಕ್ಸಿನ್ ಅಲ್ಲ, ಡ್ರಾಮಾ ಮಾಡುತ್ತಿದ್ದಾರೆಂದು, ಕಾಂಗ್ರೆಸ್ ನಾಯಕರು ದೂರಿದ್ದರು ಎಂದು ಕುಮಾರಸ್ವಾಮಿ ಕಿಡಿಕಾರಿದರು.

NEWS DESK

TIMES OF BENGALURU