ಇದು ಸರ್ಕಾರವೇ ತಂದು ಹಂಚಿದ ಕಾಯಿಲೆ

ಬೆಂಗಳೂರು : ಕೊರೊನಾ ನಿಯಂತ್ರಿಸದೆ ಸರ್ಕಾರ ಬಡ ಜನರನ್ನುಸಾಯಲು ಬಿಟ್ಟಿದೆ, ಬದಲಾಗಿ ಕೊರೊನಾ ಔಷಧಿ, ಲಸಿಕೆ ಹಾಗೂ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಚಾರ ಮಾಡಿ ಲೂಟಿ ಹೊಡೆಯುತ್ತಿದ್ದಾರೆ. ಗುತ್ತಿಗೆದಾರರ ಬಳಿ ಗುಣಮಟ್ಟದ ಬಗ್ಗೆ ಕೇಳುತ್ತಿಲ್ಲ, ನೇರವಾಗಿ ಎಷ್ಟು ಕಮಿಷನ್ ಕೊಡುತ್ತಿರಾ ಎಂದು ಕೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು. ಸುದ್ದಿಗಾರರೊಂದಿಗೆ ಮಾನಾಡಿದ ಅವರು, ಲಾಕ್ ಡೌನ್ ಸಂಕಷ್ಟದಲ್ಲಿ ಇರುವವರಿಗೆ ಸರ್ಕಾರಗಳು ಆರ್ಥಿಕ ಪ್ಯಾಕೇಜ್ ನೀಡಲೇಬೇಕು. ಇದು ಸರ್ಕಾರವೇ ತಂದು ಹಂಚಿದ ಕಾಯಿಲೆ ಎಂದು ಹೇಳಿದರು.

NEWS DESK

TIMES OF BENGALURU