ರಾಜ್ಯದಲ್ಲಿ ಶೇ. 100 ರಷ್ಟು ಲಸಿಕೆ ನೀಡಲು ಪ್ರಯತ್ನ

ಬೆಂಗಳೂರು : ನವೆಂಬರ್ ವೇಳೆಗೆ ರಾಜ್ಯದಲ್ಲಿ ಶೇ. 100 ರಷ್ಟು ಎರಡು ಡೋಸ್ ಕೋವಿಡ್ ಲಸಿಕೆ ನೀಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಕ್ಕೆ ಇದುವರೆಗೂ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಸೇರಿ ಒಟ್ಟು 1,22,20,510 ಡೋಸ್ ಲಸಿಕೆ ಬಂದಿದೆ. 1,13,61,234 ಜನರಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1,11,26,340 ಕೋವಿಡ್ ಲಸಿಕೆಯ ಡೋಸನ್ನು ನೀಡಿದೆ. ರಾಜ್ಯ ಸರ್ಕಾರವು 9, 50,000 ಕೋವಿಶೀಲ್ಡ್ ಮತ್ತು 1,44, 174 ಕೋವ್ಯಾಕ್ಸಿನ್ ಖರೀದಿಸಿದೆ ಎಂದು ಮಾಹಿತಿ ನೀಡಿದ್ದಾರೆ.

NEWS DESK

TIMES OF BENGALURU