ಯಡಿಯೂರಪ್ಪನವರೇ ತಜ್ಞರ ಮಾತಿಗೆ ಬೆಲೆ ಕೊಡಿ

ಬೆಂಗಳೂರು : ರಾಜ್ಯ ಸರ್ಕಾರವು ಟೆಸ್ಟಿಂಗ್ ಕಡಿತಗೊಳಿಸಿ ದೇಶದ ನಂ.1 ಸೋಂಕಿತ ರಾಜ್ಯ ಎಂಬ ಹಣೆಪಟ್ಟಿ ತೊಳೆದುಕೊಳ್ಳುವ ಪ್ರಯತ್ನದಲ್ಲಿದೆ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಸಿಎಂ ಬಿ.ಎಸ್. ಯಡಿಯೂರಪ್ಪನವರೇ ಟೆಸ್ಟಿಂಗ್ ಕಡಿತಗೊಳಿಸಿ ದೇಶದ ನಂ1 ಸೋಂಕಿತ ರಾಜ್ಯ ಎಂಬ ಹಣೆಪಟ್ಟಿ ತೊಳೆದುಕೊಳ್ಳುವ ನಿಮ್ಮ ಪ್ರಯತ್ನ ಬಿಟ್ಟುಬಿಡಿ. ಟೆಸ್ಟಿಂಗ್ ವ್ಯಾಪಕಗೊಳಿಸಿದಷ್ಟು ಸೋಂಕಿತರನ್ನು ಗುರುತಿಸಿ, ವರ್ಗಿಕರಿಸಲು ಸಾಧ್ಯವಾಗುತ್ತದೆ. ಈಗ ಆಗಬೇಕಾದ್ದು ಹೆಸರು ಉಳಿಸಿಕೊಳ್ಳುವ ಪ್ರಯತ್ನವಲ್ಲ ಜೀವ ಉಳಿಸುವ ಪ್ರಯತ್ನ. ತಜ್ಞರ ಮಾತಿಗೆ ಬೆಲೆ ಕೊಡಿ ಎಂದು ಹೇಳಿದೆ.

NEWS DESK

TIMES OF BENGALURU