ಇದೊಂದು ಬೋಗಸ್​ ಪ್ಯಾಕೇಜ್

ಬೆಂಗಳೂರು: ಕರೊನಾ ಹಿನ್ನೆಲೆ ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್​ ಬೋಗಸ್​ ಆಗಿದೆ. ಜನರ ದುಡ್ಡನ್ನು ಜನರಿಗೇ ಕೊಡಲು ನಿಮಗೇನು ಕಷ್ಟ? ಬಡವರಿಗೆ ಸಹಾಧನ ಕೊಡಲು ಆರ್ಥಿಕ ಸಂಕಷ್ಟ ಇದ್ಯಾ? ಸರ್ಕಾರವೇನು ಬೆವರು ಸುರಿಸಿ ದುಡಿದ ಹಣವನ್ನು ಕೊಡ್ತಿದ್ಯಾ? ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕಟುವಾಗಿ ಪ್ರಶ್ನಿಸಿದ್ದಾರೆ.

ಸಿಎಂ ಯಡಿಯೂರಪ್ಪ ಘೋಷಿಸಿದ ವಿಶೇಷ ಪ್ಯಾಕೇಜ್​ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ಇರೋದು 20 ಸಾವಿರ ಮಂದಿ ಮಾತ್ರ ಹೂವು ಬೆಳೆಗಾರರಿದ್ದಾರೆ ಎಂದು ಹೇಗೆ ಹೇಳ್ತೀರಿ. ಹೆಕ್ಟೇರ್​ಗೆ 10 ಸಾವಿರ ಸಹಾಯಧನ ಅಂದ್ರೆ ಎಕರೆಗೆ ಸಿಗೋದು ಮೂರೂವರೆ ಸಾವಿರ ರೂಪಾಯಿ. ಒಂದು ಎಕರೆಯಲ್ಲಿ ಬೆಳೆ ಬಿತ್ತನೆ ಮಾಡೋಕೆ ಎಷ್ಟು ಖರ್ಚಾಗುತ್ತೆ ಎನ್ನೋದರ ಬಗ್ಗೆಯಾದರೂ ಯೋಚಿಸಬೇಕಲ್ಲವಾ? ಇವರಿಗೆ 20 ಸಾವಿರ ರೈತರ ಪಟ್ಟಿ ಕೊಟ್ಟವರ್ಯಾರು? ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ ಈ ಪ್ಯಾಕೇಜ್​. ಇದು ಕಣ್ಣೊರೆಸುವ ತಂತ್ರ ಅಷ್ಟೆ ಎಂದು ಕಿಡಿಕಾರಿದ್ದಾರೆ.

NEWS DESK

TIMES OF BENGALURU