ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಇಳಿಕೆ

ಬೆಂಗಳೂರು : ಕೊರೊನಾ ಸೋಂಕು ಭಯದಿಂದ ಕ್ರಿಮಿನಲ್ ಗಳು ಕೂಡ ರಜೆ ಮೊರೆ ಹೋದಂತಿದೆ. ಕೊರೊನಾ ಭೀತಿ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಆದರೆ, ಸೈಬರ್ ಕಳ್ಳರು ಮಾತ್ರ ತಮ್ಮ ಕೈಚಳಕ ತೋರಿದ್ದಾರೆ.ಕೊರೊನಾ ಲಾಕ್ ಡೌನ್ ನಿಯಮ ಜಾರಿ ಮಾಡುವ ಜವಾಬ್ಧಾರಿ ಪೊಲೀಸರಿಗೆ ವಹಿಸಲಾಗಿದೆ.

ಹೀಗಾಗಿ ನಾಕಬಂದಿ ವಾಹನ ಚೆಕ್ ಪಾಯಿಂಟ್, ಅನಾವಶ್ಯಕವಾಗಿ ಸಂಚರಿಸುವ ವಾಹನಗಳ ಜಪ್ತಿ, ಮಾಸ್ಕ್ ಇಲ್ಲದವರಿಗೆ ದಂಡ ಹೀಗೆ ಕೊರೊನಾ ಸಂಬಂಧಿತ ಕಾರ್ಯಗಳಲ್ಲಿ ಪೊಲೀಸರು ನಿರತರಾಗಿದ್ದಾರೆ. ಆದರೆ ಕಳ್ಳರು, ದರೋಡೆಕೋರರು ಕೊರೊನಾ ಗೆ ಹೆದರಿ ಸುಮ್ಮನಾಗಿದ್ದಾರೆ. ಹೀಗಾಗಿ ಬಹುತೇಕ ಅಪರಾಧಗಳು ಕಡಿಮೆಯಾಗಿವೆ. ಇನ್ನು ಪೊಲೀಸರು ಕೂಡ ಹಳೇ ಪ್ರಕರಣಗಳ ತನಿಖೆ ಕೈ ಬಿಟ್ಟಿದ್ದಾರೆ. ಹೀಗಾಗಿ ರಾಜಧಾನಿಯಲ್ಲಿ ಏಕಾಏಕಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ ಎಂಧು ಪೊಲೀಸರು ತಿಳಿಸಿದ್ದಾರೆ.

NEWS DESK

TIMES OF BENGALURU