ಸಂಚಾರಿ ಐಸಿಯು ಬಸ್ ಸಂಚಾರ ಆರಂಭ

ಬೆಂಗಳೂರು : ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾದಂತೆ, ಬೆಂಗಳೂರು ನಗರ ಸೇರಿದಂತೆ ರಾಜ್ಯಾಧ್ಯಂತ ಬೆಡ್ ಗಳ ಕೊರತೆ ಎದುರಾಗಿದೆ. ಇದರ ಮಧ್ಯೆ ಕೊರೋನಾ ಸೋಂಕಿತರಿಗೆ ಸಂಚಾರಿ ಐಸಿಯು ಬಸ್ ಸಂಚಾರವನ್ನು ಕೆ ಎಸ್ ಆರ್ ಟಿಸಿಯಿಂದ ಆರಂಭಗೊಂಡಿದ್ದು, ಗುಡ್ ನ್ಯೂಸ್ ದೊರೆತಿದೆ.

ಹೌದು ತುರ್ತು ಸಂದರ್ಭದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಕೆ ಎಸ್ ಆರ್ ಟಿ ಸಿಯಿಂದ, ಸಂಚಾರಿ ಐಸಿಯು ಬಸ್ ಸಂಚಾರ ಇಂದಿನಿಂದ ಆರಂಭಗೊಂಡಿದೆ.ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಇಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಕೋರೋನ ಸೋಂಕಿತರಿಗೆ ಅವಶ್ಯ ಇರುವಂತ ಐಸಿಯು ಆನ್ ವೀಲ್ಸ್ ಮತ್ತು ಆಕ್ಸಿಜನ್ ಆನ್ ವೀಲ್ಸ್ ಬಸ್ಸುಗಳನ್ನು ಲೋಕಾರ್ಪಣೆಗೊಳಿಸಿದರು.

NEWS DESK

TIMES OF BENGALURU