ನನ್ನನ್ನು ಬೇರೆಯವರ ಜೊತೆಗೆ ಹೋಲಿಸಬೇಡಿ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಕೊರೋನಾ ಲಾಕ್ ಡೌನ್ ಸಮಯದಲ್ಲಿ ನೊಂದವರ ಪಾಲಿಗೆ ನಿಜವಾಗಿಯೂ ರಿಯಲ್ ಲೀಡರ್ ಆಗಿದ್ದಾರೆ. ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರಿಗೆ ನಟ ಉಪೇಂದ್ರ ಸಹಾಯ ಹಸ್ತ ಚಾಚಿದ್ದಾರೆ. ಚಿತ್ರರಂಗವನ್ನೇ ನಂಬಿಕೊಂಡಿರುವ ಅನೇಕ ಕುಟುಂಬಗಳಿಗೆ ನಟ ಉಪೇಂದ್ರ ದಿನಸಿ ಕಿಟ್ ನೀಡುತ್ತಿದ್ದಾರೆ.

ಈ ಕಾರ್ಯದಲ್ಲಿ ಉಪೇಂದ್ರ ಜೊತೆಗೆ ಹಲವರು ಕೈಜೋಡಿಸಿದ್ದಾರೆ. ಆದರೆ ಉಪೇಂದ್ರ ಅವರ ಈ ಕಾರ್ಯಕ್ಕೆ ಕೆಲವು ಕಿಡಿಗೇಡಿಗಳು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ, ಈ ನಡುವೆ ನಟ ಹಾಗೂ ಪ್ರಜಾಕಾರಣಿ ಉಪೇಂದ್ರ ಎಲ್ಲಾ ರಾಜಕೀಯ ಬೆಂಬಲಿಗರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ನನ್ನನ್ನು ಬೇರೆಯವರ ಜೊತೆಗೆ ಹೋಲಿಸಬೇಡಿ. ಇನ್ನೊಬ್ಬ ನಾಯಕ ಹುಟ್ಟಿಕೊಳ್ತಾನೆ ಎಂದು ಆತಂಕ ಪಡಬೇಡಿ ಮನವರಿಕೆ ಮಾಡಿಕೊಟ್ಟಿದ್ದಾರೆ.

NEWS DESK

TIMES OF BENGALURU