ಹಸಿದವರಿಗೆ ಆಸರೆಯಾದ ಹ್ಯಾಟ್ರಿಕ್ ಹೀರೋ

ಬೆಂಗಳೂರು: ಕೊರೋನಾ ಸಮಯದಲ್ಲಿ ಎಷ್ಟೋ ಮಂದಿ ದುಡಿಮೆಯಿಲ್ಲದೇ ಹೊಟ್ಟೆಗೆ ಹಿಟ್ಟಿಲ್ಲದೇ ಸಂಕಷ್ಟದಲ್ಲಿದ್ದಾರೆ. ಅಂತಹವರಿಗೆ ನಟ ಶಿವರಾಜ್ ಕುಮಾರ್ ದಂಪತಿ ನೆರವಿಗೆ ಬಂದಿದ್ದಾರೆ. ಶಿವರಾಜ್ ಕುಮಾರ್-ಗೀತಾ ದಂಪತಿ ‘ಆಸರೆ’ ಯೋಜನೆ ಮೂಲಕ ನಾಗವಾರದ ಸುಮಾರು 500 ಮಂದಿಗೆ ನಿತ್ಯ ಊಟ, ಉಪಹಾರ ಒದಗಿಸುತ್ತಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ಈ ಯೋಜನೆ ಜಾರಿಯಲ್ಲಿರಲಿದೆ.

ಆಹಾರ ಸರಬರಾಜಿಗಾಗಿ ಶಿವಣ್ಣ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಶಿವಣ್ಣ ಆಪ್ತ, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನೇತೃತ್ವ ವಹಿಸಿದ್ದಾರೆ. ನಿತ್ಯವೂ ನಾಗವಾರದ ಸುತ್ತಮುತ್ತಲಿನ ಜನ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

NEWS DESK

TIMES OF BENGALURU