ಕಲಾವಿದರಿಗೆ, ತಂತ್ರಜ್ಞರಿಗೆ ಉಚಿತ ಲಸಿಕೆ

ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅಗತ್ಯ ಪ್ರಮಾಣದಲ್ಲಿ ಲಸಿಕೆ ಸರಬರಾಜು ಆಗುತ್ತಿಲ್ಲವಾದ್ದರಿಂದ ಲಸಿಕೆಗಾಗಿ ಕಾಯುವುದು, ಹುಡುಕಾಡುವುದು ಸಾಮಾನ್ಯವಾಗಿದೆ.ಇದೀಗ ಟಿವಿ ಅಸೋಸಿಯೇಷನ್‌ನವರು ಸರ್ಕಾರಕ್ಕೆ ಮನವಿ ಮಾಡಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‍ ನ ಎಲ್ಲ ಅಜೀವ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ (45 ವರ್ಷ ಮೇಲ್ಪಟ್ಟವರಿಗೆ) ಉಚಿತ ಲಸಿಕೆ ವ್ಯವಸ್ಥೆ ಮಾಡಿದೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಂವಿ ಶಿವಕುಮಾರ್ ಅವರು ಕಂದಾಯ ಸಚಿವ ಆರ್.ಅಶೋಕ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿ ಕಿರುತೆರೆ ಕಲಾವಿದರಿಗೆ ಸಾಮೂಹಿಕವಾಗಿ ಲಸಿಕೆ ನೀಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಸರ್ಕಾರವು ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸುವ 45 ವರ್ಷ ಮೇಲ್ಪಟ್ಟ ಕಲಾವಿದರಿಗೆ ತಂತ್ರಜ್ಞರಿಗೆ ಉಚಿತ ಲಸಿಕೆಯನ್ನು ಮೇ 18 ರಿಂದ ಮೇ 20 ರ ವರೆಗೆ ಹಾಕಿಸಿಕೊಳ್ಳಬಹುದು.

NEWS DESK

TIMES OF BENGALURU