ಜೂನ್ 1 ರಿಂದ ಹಾಲಿನ ದರ ಕಡಿತ

ಬೆಂಗಳೂರು: ಹಾಲು ಒಕ್ಕೂಟಗಳು ಆರ್ಥಿಕ ನಷ್ಟಕ್ಕೆ ಸಿಲುಕಿವೆ. ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಕಡಿತಗೊಳಿಸಲು ಒಕ್ಕೂಟಗಳು ಚಿಂತನೆ ನಡೆಸಿವೆ. ಇದರಿಂದಾಗಿ ರೈತರಿಗೆ ನಷ್ಟ ಉಂಟಾಗಲಿದೆ.
14 ಹಾಲು ಒಕ್ಕೂಟದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಆದರೆ ಲಾಕ್‌ಡೌನ್ ಪರಿಣಾಮ ಹೋಟೆಲ್ ತೆರೆದಿಲ್ಲ. ಸಮಾರಂಭಗಳು ನಡೆಯುತ್ತಿಲ್ಲ.

ಇದರಿಂದಾಗಿ ಹಾಲಿನ ಮಾರಾಟ ಕುಸಿತಕಂಡಿದೆ.ಶ್ವದ 8ನೇ ಅತಿದೊಡ್ಡ ಹಾಲು ಸಂಸ್ಕಾರಕವಾಗಿ ಹೊರಹೊಮ್ಮಿದ ಅಮುಲ್ಬೆಂಗಳೂರು ಹಾಲು ಒಕ್ಕೂಟ ಒಂದರಲ್ಲೇ ದಿನಕ್ಕೆ ಸುಮಾರು 50 ಲಕ್ಷ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಹಾಲು ಒಕ್ಕೂಟದ ಪರಿಸ್ಥಿತಿ ಹಿನ್ನಲೆಯಲ್ಲಿ ಹಾಲು ಖರೀದಿ ದರವನ್ನು ಕಡಿಮೆ ಮಾಡುವುದು ಅನಿವಾರ್ಯ ಎಂದು ಕೆಎಂಎಫ್ ಅಧಿಕಾರಿಗಳು ಹೇಳಿದ್ದಾರೆ. ಜೂನ್ 1ರಿಂದ ಅನ್ವಯವಾಗುವಂತೆ ಹಾಲು ಖರೀದಿ ದರವನ್ನು ಲೀಟರ್‌ಗೆ 1.50 ರೂ. ಕಡಿಮೆ ಮಾಡಲು ಚಿಂತನೆ ನಡೆದಿದೆ. ನಷ್ಟವನ್ನು ಎಷ್ಟು ದಿನ ತಡೆದುಕೊಳ್ಳಲು ಸಾಧ್ಯ. ಖರೀದಿ ದರವನ್ನು ಕಡಿತ ಮಾಡುವುದು ಅನಿವಾರ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

NEWS DESK

TIMES OF BENGALURU