ನವದೆಹಲಿ: ಕೋವಿಡ್ ಬಗ್ಗೆ ಜಾರಿಗೊಳಿಸಲು ಅಸಾಧ್ಯವಾದ ಆದೇಶಗಳನ್ನು ನೀಡಬೇಡಿ ಎಂದು ಹೈಕೋರ್ಟ್ ಗಳಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ . ಕೋವಿಡ್ ಸಂಬಂಧಿತ ಪ್ರಕರಣಗಳಲ್ಲಿ ಹೈಕೋರ್ಟ್ ಗಳು ಜಾರಿಗೆ ತರಲು ಅಸಾಧ್ಯವಾದ ಆದೇಶಗಳನ್ನು ಜಾರಿಗೊಳಿಸುವುದನ್ನು ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.ಸೊಮೊಟೊ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಡೆದಿದೆ. ಈ ಪ್ರಕರಣದಲ್ಲಿ 4 ತಿಂಗಳುಗಳೊಳಗೆ ಉತ್ತರ ಪ್ರದೇಶದ ಎಲ್ಲಾ ನರ್ಸಿಂಗ್ ಹೋಮ್ ಹಾಸಿಗೆಗಳು ಆಮ್ಲಜನಕ ಸೌಲಭ್ಯಗಳನ್ನು ಹೊಂದಿರಬೇಕು ಎಂದು ನ್ಯಾಯಾಲಯ ಹೇಳಿದೆ.
ಉತ್ತರ ಪ್ರದೇಶದ ಪ್ರತಿ ಗ್ರಾಮದಲ್ಲಿಯೂ ಐಸಿಯು ಸೌಲಭ್ಯದೊಂದಿಗೆ ಎರಡು ಅಂಬುಲೆನ್ಸ್ ಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಹೈಕೋರ್ಟ್ ಗಳು ಜಾರಿಗೆ ತರಲು ಸಾಧ್ಯವಿರುವ ಆದೇಶಗಳನ್ನು ನೀಡಬೇಕು. ಜಾರಿಗಳಿಸಲು ಸಾಧ್ಯವಾಗದ ಆದೇಶ ನೀಡಬಾರದು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿನಿತ್ ಸರನ್ ಮತ್ತು ಬಿ.ಆರ್. ಗವಾಯಿ ಅವರ ಸುಪ್ರೀಂಕೋರ್ಟ್ ಪೀಠ ಎಂದು ತಿಳಿಸಿದೆ.
NEWS DESK
TIMES OF BENGALURU