ಸೆಪ್ಟೆಂಬರ್‌ನಲ್ಲಿ ಐಪಿಎಲ್ ಸರಣಿ ಪುನರಾರಂಭ

ಬೆಂಗಳೂರು: ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯು ಸೆಪ್ಟೆಂಬರ್ 18 ಅಥವಾ 19 ರಂದು ಯುಎಇಯಲ್ಲಿ ಪುನರಾರಂಭಗೊಳ್ಳಲಿದ್ದು, ಮೂರು ವಾರಗಳ ಸರಣಿಯಲ್ಲಿ 10 ದಿನಗಳ ಕಾಲ ಎರಡೆರಡು ಪಂದ್ಯಗಳನ್ನು ಆಯೋಜಿಸುವ ನಿರೀಕ್ಷೆ ಇದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೈನಲ್ ಪಂದ್ಯವು ಅಕ್ಟೋಬರ್ 9 ಅಥವಾ 10 ರಂದು ನಡೆಯಬಹುದು.

ಈ ಋತುವಿನ ಉಳಿದ 31 ಪಂದ್ಯಗಳನ್ನು ಪೂರ್ಣಗೊಳಿಸಲು ಮೂರು ವಾರಗಳ ಸಮಯ ಸಾಕಾಗಲಿದೆ ಎಂದು ಅವರು ಹೇಳಿದ್ದಾರೆ. ಬಯೊಬಬಲ್‌ನಲ್ಲಿದ್ದ ಹಲವು ಆಟಗಾರರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ಬಳಿಕ ಮೇ 4ರಂದು ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗಿತ್ತು. ಈ ಬಗ್ಗೆ ಬಿಸಿಸಿಐ ಸಂಬಂಧಿಸಿದ ಎಲ್ಲರ ಜೊತೆ ಮಾತನಾಡಿದೆ. ಸೆಪ್ಟೆಂಬರ್ 18 ರಿಂದ 20 ರ ನಡುವೆ ಪಂದ್ಯಾವಳಿ ಪ್ರಾರಂಭವಾಗಬಹುದು. ಸೆಪ್ಟೆಂಬರ್ 18 ಮತ್ತು 19 ಕ್ರಮವಾಗಿ ಶನಿವಾರ ಮತ್ತು ಭಾನುವಾರ ಆಗಿರುವುದರಿಂದ, ವಾರಾಂತ್ಯದಂದು ಪಂದ್ಯಾವಳಿಯನ್ನು ಮರು ಆರಂಭಿಸಲು ಬಯಸುತ್ತಿದ್ದೇವೆ, ಎಂದು ಮಾಹಿತಿ ನೀಡಿದ್ದಾರೆ.

NEWS DESK

TIMES OF BENGALURU