ಬೆಂಗಳೂರು: ಪ್ರಧಾನಿ ಮೋದಿ ಆಕಾಶವಾಣಿಯಲ್ಲಿ ನಡೆಸುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರೀಶಾ ಗಜನಿ ಅವರೊಂದಿಗೆ ಸಂಭಾಷಣೆ ನಡೆಸಿದರು. ಆಕ್ಸಿಜನ್ ಎಕ್ಸ್ಪ್ರೆಸ್ನ ಲೋಕೋ ಪೈಲೆಟ್ ಆಗಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಅತ್ಯವಶ್ಯಕವಾದ ಮೆಡಿಕಲ್ ಆಕ್ಸಿಜನ್ಅನ್ನು ವಿವಿಧ ಪ್ರದೇಶಗಳಿಗೆ ತ್ವರಿತವಾಗಿ ಪೂರೈಸುವ ಕೆಲಸದಲ್ಲಿ ತೊಡಗಿರುವ ಶಿರೀಶಾ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಮನ್ ಕಿ ಬಾತ್ನ 77ನೇ ಸಂಚಿಕೆಯಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಹಲವು ಮುಂಚೂಣಿ ಕಾರ್ಯಕರ್ತರೊಂದಿಗೆ ಮೋದಿ ವಾರ್ತಾಲಾಪ ನಡೆಸಿದರು. ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿ ಕರೊನಾ ವಾರಿಯರ್ಗಳ ಮಹತ್ವಪೂರ್ಣ ಸೇವೆ ಎಲ್ಲರೂ ಹೆಮ್ಮೆ ಪಡುವಂಥದ್ದು ಎಂದರು.
NEWS DESK
TIMES OF BENGALURU