ಕೇಂದ್ರದಿಂದ ರಾಜ್ಯಕ್ಕೆ 1.64 ಲಕ್ಷ ಲಸಿಕೆ ಪೂರೈಕೆ

ಬೆಂಗಳೂರು : ಕೇಂದ್ರ ಸರ್ಕಾರದಿಂದ ಇಂದು ಕರ್ನಾಟಕಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

ಟ್ವೀಟ್ ಕುರಿತು ಮಾಹಿತಿ ಹಂಚಿಕೊಂಡ ಡಾ.ಕೆ ಸುಧಾಕರ್ ಕೇಂದ್ರ ಸರ್ಕಾರದಿಂದ ಇಂದು ಕರ್ನಾಟಕಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ, ಒಟ್ಟು 17.8 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ. ಕೇಂದ್ರ ಸರ್ಕಾರದಿಂದ 15.86 ಲಕ್ಷ ಡೋಸ್, ಹಾಗೂ ರಾಜ್ಯ ಸರ್ಕಾರದ 1.94 ಲಕ್ಷ ಡೋಸ್ ಖರೀದಿ ಮಾಡಿದೆ. ಇನ್ನೂ, ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು ಎಂದು ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

NEWS DESK

TIMES OF BENGALURU