ಎರಡನೇ ಅಲೆಯಲ್ಲಿ 624 ವೈದ್ಯರು ಬಲಿ

ನವದೆಹಲಿ: ಕೊರೊನಾ ವೈರಸ್‌ನ ಎರಡನೇ ಅಲೆಯ ಅವಧಿಯಲ್ಲಿ 624 ವೈದ್ಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೊಸಿಯೇಶನ್ ತಿಳಿಸಿದೆ. ಕೊರೊನಾ ವೈರಸ್‌ನ ಎರಡನೇ ಅಲೆಯ ಇತ್ತೀಚಿನ ಅಂಕಿಅಂಶಗಳನ್ನು ಅದು ಬಹಿರಂಗಪಡಿಸಿದೆ.

ಐಎಂಎಯ ಕೊರೊನಾ ಅಂಕಿಅಂಶಗಳ ಪ್ರಕಾರ ಇದರಲ್ಲಿ ದೆಹಲಿಯಲ್ಲಿ 109 ವೈದ್ಯರು ಮೃತಪಟ್ಟಿರುವುದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರದಲ್ಲಿ 96 ವೈದ್ಯ ಹಾಗೂ ಹಾಗೂ ಉತ್ತರ ಪ್ರದೇಶದಲ್ಲಿ 79 ವೈದ್ಯರು ಎರಡನೇ ಅಲೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೊದಲ ಅಲೆಯಲ್ಲಿ 848 ವೈದ್ಯರು ಪ್ರಾಣಕಳೆದುಕೊಂಡಿದ್ದರು ಎಂಬುದಾಗಿ ಅದು ಮಾಹಿತಿಯನ್ನು ನೀಡಿದೆ.

NEWS DESK

TIMES OF BENGALURU