ಮಾತು ಕೊಟ್ಟು ಸರ್ಕಾರ ಸುಮ್ಮನಿರೋದೇಕೆ..?

ಬೆಂಗಳೂರು : ಸಾರಿಗೆ ನೌಕರರ ಒಂಭತ್ತು ಬೇಡಿಕೆ ಈಡೇಸುತ್ತೇವೆ ಎಂದು ಸರ್ಕಾರ ಲಿಖಿತ ಭರವಸೆ ಕೊಟ್ಟು ಮೌನವಾಗಿದೆ. ನೌಕರರ ಬೇಡಿಕೆ ಈಡೇರಿಸದೆ, ಸರ್ಕಾರ ವಚನ ಭ್ರಷ್ಟವಾಗಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಮಾ.15ರಂದು ನೀವು ಕೊಟ್ಟ ಗಡುವು ಮುಕ್ತಾಯವಾಗಲಿದೆ. ಸರ್ಕಾರವನ್ನು ಎಚ್ಚರಿಸಲು ಸಾಂಕೇತಿಕವಾಗಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಶೀಘ್ರ ಆರನೇ ವೇತನ ಆಯೋಗ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.ಸಚಿವ ಲಕ್ಷ್ಮಣ ಸವದಿ, ತಪ್ಪು ಮಾತುಗಳನ್ನು ಆಡಬಾರದು. ಜವಾಬ್ದಾರಿ ಮಂತ್ರಿಯಾಗಿ ಮಾತನಾಡಬೇಕು. ಒಂಭತ್ತು ಬೇಡಿಕೆಯಲ್ಲಿ ಯಾವುದು ಕಾರ್ಯಗತವಾಗಿದೆ ತಿಳಿಸಬೇಕು. ಬರೀ ಮಾತಿನಲ್ಲಿ ಹೊಟ್ಟೆ ತುಂಬಲ್ಲ. ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಪರೋಕ್ಷವಾಗಿ ಸಚಿವ ಲಕ್ಷ್ಮಣ ಸವದಿಗೆ ಕುಟುಕಿದರು.

ಸಾರಿಗೆ ಇಲಾಖೆಯು ಸೇವಾ ಕ್ಷೇತ್ರವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರಿಗೆ ನೌಕರರ ಮನವಿಗೆ ಸ್ಪಂದಿಸಬೇಕು. ಹೊಸ ಬಸ್ ಗಳನ್ನು ಸಾಲ ಮಾಡಿ ಖರೀದಿಸುವ ಮನಸ್ಸು ಮಾಡುವ ಸರ್ಕಾರ, ಸಾರಿಗೆ ನೌಕರರ ಬೇಡಿಕೆ ಏಕೆ ಈಡೇರಿಸಿಲ್ಲ ಎಂದು ಪ್ರಶ್ನಿಸಿದರು.

News Desk
Times Of Bengaluru