ವಿಶ್ವದಲ್ಲೇ ಬೆಸ್ಟ್​ ವಿವಿ ಸ್ಥಾನ ಪಡೆದ ಬೆಂಗಳೂರಿನ ಐಐಎಸ್ಸಿ

ಬೆಂಗಳೂರು: ವಿಶ್ವದ ಟಾಪ್ ಸಂಶೋಧನಾ ವಿವಿಯಲ್ಲಿ ಬೆಂಗಳೂರಿನ ಐಐಎಸ್ಸಿ ನಂಬರ್​ 1 ಸ್ಥಾನ ಪಡೆದುಕೊಂಡಿದೆ. 2022ರ ಉನ್ನತ 200 ವಿಶ್ವವಿದ್ಯಾಲಯಗಳ ಪಟ್ಟಿ ಪ್ರಕಟವಾಗಿದ್ದು, ಸಂಶೋಧನೆಗೆ ಸಂಬಂಧಿಸಿದ ಪಟ್ಟಿಯಲ್ಲಿ ಐಐಎಸ್ಸಿಗೆ ನಂಬರ್ 1 ಪಟ್ಟ ದೊರಕಿದೆ. ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ನಿಂದ ಜಾಗತಿಕ ಅಂತಾರಾಷ್ಟ್ರೀಯ ಶ್ರೇಯಾಂಕಗಳ ಪಟ್ಟಿ ಬಿಡುಗಡೆಯಾಗಿದೆ. ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ. ಇದು ತನ್ನ 18 ನೇ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಿದ್ದು, ಭಾರತದ ಮೂರು ವಿಶ್ವವಿದ್ಯಾಲಯಗಳು ಕ್ಯೂ.ಎಸ್. ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

NEWS DESK

TIMES OF BENGALURU