ಯಾರ ಮನೆಗೂ ಹೋಗಿ ಲಸಿಕೆ ಹಾಕುವ ಹಾಗಿಲ್ಲ

ಬೆಂಗಳೂರು: ಇಂದು ಬೆಳಗ್ಗೆ ಹಿರೇಕೆರೂರು ಆಸ್ಪತ್ರೆಯ ಸಿಬ್ಬಂದಿ ಕೃಷಿ ಸಚಿವ ಬಿ.ಸಿ. ಪಾಟೀಲ್‍ರ ಮನೆಗೆ ಬಂದು ಸಚಿವರು ಮತ್ತು ಅವರ ಪತ್ನಿ ವನಜಾ ಪಾಟೀಲ್?ಗೆ ಲಸಿಕೆ ಹಾಕಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿದ್ದಾರೆ.

ಆದರೆ, ಬಿ.ಸಿ.ಪಾಟೀಲ್ ಮಾತ್ರ ಆರೋಗ್ಯ ಸಿಬ್ಬಂದಿಯನ್ನ ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು ಲಸಿಕೆ ಪಡೆದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಕೋವಿಡ್ ವ್ಯಾಕ್ಸಿನೇಷನ್‍ನಲ್ಲೂ ವಿವಿಐಪಿ ಸಂಸ್ಕøತಿ ಇದ್ಯಾ? ಎಂದು ಸಚಿವರ ನಡೆಗೆ ಕಿಡಿಕಾರಿದ್ದರು. ಎಲ್ಲ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಕೆ.ಸುಧಾಕರ್, ನಾನು ಬಿ.ಸಿ.ಪಾಟೀಲ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುವೆ.

ನಮ್ಮ ಅಧಿಕಾರಿಗಳು ಅವರಿಗೆ ಹೇಳಬಹುದಿತ್ತು. ಆದರೆ, ಅವರು ಮಂತ್ರಿಗಳು ಅನ್ನೋ ಕಾರಣಕ್ಕೆ ಬಹುಶಃ ಅವರು ಹೇಳಿಲ್ಲ ಅನ್ನಿಸುತ್ತದೆ. ಯಾರ ಮನೆಗೂ ಹೋಗಿ ಲಸಿಕೆ ಹಾಕುವ ಹಾಗಿಲ್ಲ. ಮನೆಯಲ್ಲಿ ಲಸಿಕೆ ಪಡೆದ್ರೆ ತಪ್ಪಿಲ್ಲ ಅನ್ನೋ ತಪ್ಪು ಗ್ರಹಿಕೆಯಿಂದಾಗಿ ಈ ಘಟನೆ ನಡೆದಿದೆ. ಬಿ.ಸಿ.ಪಾಟೀಲ್?ರು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಸ್ವಲ್ಪ ತಪ್ಪಾಗಿದ್ದು, ಮತ್ತೆ ಈ ರೀತಿ ಆಗದಂತೆ ಎಚ್ಚರವಹಿಸುತ್ತೇವೆ ಎಂದು ಹೇಳಿದರು.