ಸಾಹುಕಾರ್ ತಮ್ಮನಿಂದ ಸಿಎಂಗೆ ಬ್ಲಾಕ್ ಮೇಲ್

ಬೆಂಗಳೂರು: ಸಿಎಂ ನಿನ್ನ ಸಿಡಿ ಬಿಟ್ಟು ಬಿಡ್ತೀನಿ ಅಂತ ರಾಜೀನಾಮೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ ಅವರ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಸಿಎಂ ಬಿಎಸ್‍ವೈ ಅವರನ್ನು ಹೆದರಿಸುತ್ತಿದ್ದಾರೆ ಎಂಬ ಗಂಭಿರವಾದ ಆರೋಪವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದಾರೆ.

ಅವರು ಜನಧ್ವನಿ ರ‍್ಯಾಲಿಯಲ್ಲಿ ಮಾತನಾಡುತ್ತ , ಇದೇ ವೇಳೆ ಅವರು ರಮೇಶ್ ಜಾರಕಿಹೊಳಿಯವರ ಸಿಡಿಯನ್ನು ನೋಡಿದ್ರೆ ಅಸಹ್ಯವಾಗುತ್ತದೆ, ಇಂತಹವರು ಮಂತ್ರಿನಾ ? ಯಡಿಯ್ಯೂರಪ್ಪನ ಮಂತ್ರಿ ಮಂಡಲದವರು ಇವರು ಅಂತ ಹೇಳಿದರು. ಇನ್ನೂ ಇದೇ ವೇಳೆ ಶಾಸಕ ಹಾಗೂ ರಮೇಶ್ ಜಾರಕಿಹೊಳಿ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬ್ಲಾಕ್ ಮೇಲ್ ಮಾಡುತ್ತಿದ್ದು, ನಮ್ಮ ಅಣ್ಣನಿಗೆ ಏನು ಆದ್ರು ಮಾಡಿದ್ರೆ, ನಿನ್ನ ಸಿಡಿ ಬಿಡುಗಡೆ ಮಾಡಬೇಕಾಗುತ್ತದೆ ಅಂತ ಹೆದರಿಸುತ್ತಿದ್ದಾರೆ ಎಂದು ಹೇಳಿದರು.

News Desk
Times Of Bengaluru