ನವ ದೆಹಲಿ : ಕೋವಿಡ್ ಸೋಂಕು ಇಡೀ ದೇಶದ ವ್ಯವಸ್ಥೆಯನ್ನು ಅಲುಗಾಡಿಸಿದೆ. ಒಂದನೇ ಅಲೆ ಹಾಗೂ ಎರಡನೇ ಅಲೆಯ ಕಾರಣದಿಂದಾಗಿ ದೇಶದಾದ್ಯಂತ ಲಕ್ಷಾಂತರ ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ್ದ 730 ಮಂದಿ ವೈದ್ಯರು ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯಯ ಸಂಘ(ಐಎಂಎ) ಮಾಹಿತಿ ತಿಳಿಸಿದೆ. ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದ್ದ ವೈದ್ಯರ ಸಾವಿನ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಭಾರತೀಯ ವೈದ್ಯಕೀಯಯ ಸಂಘ(ಐಎಂಎ), ಬಿಹಾರದಲ್ಲಿ ಗರಿಷ್ಠ 115, ದೆಹಲಿಯಲ್ಲಿ 109, ಉತ್ತರ ಪ್ರದೇಶದಲ್ಲಿ 79, ಪಶ್ಚಿಮ ಬಂಗಾಳದಲ್ಲಿ 62, ರಾಜಸ್ಥಾನದಲ್ಲಿ 43, ಜಾರ್ಖಂಡ್ ನಲ್ಲಿ 39, ಮತ್ತು ಆಂಧ್ರಪ್ರದೇಶದಲ್ಲಿ 38 ವೈದ್ಯರುಮೃತಪಟ್ಟಿರುವುದಾಗಿ ತಿಳಿಸಿವೆ.
NEWS DESK
TIMES OF BENGALURU