ಸದನದಲ್ಲಿ ಮೊಬೈಲ್ ಬಳಸಿದ್ರೆ ಕಠಿಣ ಕ್ರಮ

ಬೆಂಗಳೂರು: ಇಂದಿನಿಂದ ಬಜೆಟ್ ಅಧೀವೇಶನ ಶುರುವಾಗಲಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಸದ್ಯಸರು ಮೊಬೈಲ್ ತರದಂತೆ ಆದೇಶ ನೀಡಲಾಗಿದೆ. ವಿಧಾನ ಪರಿಷತ್‍ನಲ್ಲಿ ಕೆಲ ಸದ್ಯಸರು ಸದನ ನಡೆಯುವ ವೇಳೆಯಲ್ಲಿ ಮೊಬೈಲ್ ಬಳಸುವುದಕ್ಕೆ ಸಂಬಂಧಪಟ್ಟಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಇನ್ಮುಂದೆ ಸದನದಲ್ಲಿ ಸದ್ಯಸರು ಮೊಬೈಲ್ ಬಳಕೆ ಮಾಡದಂತೆ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಸಭಾನಾಯಕರು, ಸಚೇತಕರು ಹಾಗು ಸದ್ಯಸರ ಜೊತೆಗೆ ಚರ್ಚೆ ನಡೆಸಿ ಸದನ ಘನತೆಗೆ ಕಪ್ಪು ಚುಕ್ಕೆ ಬಾರದ ಹಾಗೇ ನಡೆದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

News Desk
Times Of Bengaluru