ಬೆಂಗಳೂರು: ಭಾರತದಲ್ಲಿ ಈಗಾಗಲೇ ಕೋವಿಡ್ ಎರಡನೇ ಅಲೆ ಹರಡಿದ್ದು, ಇದೀಗ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಏತನ್ಮಧ್ಯೆ ಕೋವಿಡ್ 19 ಸೋಂಕಿನ ಮೂರನೇ ಅಲೆಯು ಅಕ್ಟೋಬರ್ ವೇಳೆಗೆ ಭಾರತದಲ್ಲಿ ಹರಡುವ ಸಾಧ್ಯತೆ ಇದ್ದಿರುವುದಾಗಿ ರಾಯಿಟರ್ಸ್ ನಡೆಸಿದ ವೈದ್ಯಕೀಯ ತಜ್ಞರ ಸಮೀಕ್ಷೆಯಲ್ಲಿ ಅಭಿಪ್ರಾಯವ್ಯಕ್ತವಾಗಿರುವುದಾಗಿ ತಿಳಿಸಿದೆ. ಮೂರನೇ ಅಲೆಯ ಸಾಧ್ಯತೆಯ ಕುರಿತು ಜಗತ್ತಿನಾದ್ಯಂತ ಲಸಿಕೆಯನ್ನು ನೀಡಿದ್ದರೂ ಕೂಡಾ ಅದರ ಪರಿಣಾಮದ ಕುರಿತು ವಿಶ್ವದಾದ್ಯಂತ 40 ಆರೋಗ್ಯ ತಜ್ಞರು, ವೈದ್ಯರು, ವಿಜ್ಞಾನಿಗಳು, ವೈರಾಲಜಿಸ್ಟ್ ಗಳು, ಸಾಂಕ್ರಾಮಿಕ ರೋಗ ತಜ್ಞರ ಜತೆ ಜೂನ್ 3ರಿಂದ 17ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯವ್ಯಕ್ತವಾಗಿರುವುದಾಗಿ ವರದಿ ತಿಳಿಸಿದೆ.
NEWS DESK
TIMES OF BENGALURU