ಪೊಲೀಸ್ ವಿಚಾರಣೆಗೆ ಗೈರಾದ ದಿನೇಶ್ ಕಲ್ಲಹಳ್ಳಿ

ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ದಿನೇಶ್ ಕಲ್ಲಹಳ್ಳಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ತಮಗೆ ಸೂಕ್ತ ಭದ್ರತೆ ಇಲ್ಲದ ಕಾರಣ ಇಂದು ವಿಚಾರಣೆಗೆ ಹಾಜರಾಗುವುದಿಲ್ಲ, ಮಾರ್ಚ್ 9ರಂದು ಹಾಜರಾಗುವುದಾಗಿ ಕಲ್ಲಹಳ್ಳಿ ತಿಳಿಸಿದ್ದಾರೆ.

ಈ ಬಗ್ಗೆ ಪೆÇಲೀಸರಿಗೆ ಪತ್ರ ಬರೆದಿರುವ ದಿನೇಶ್ ಕಲ್ಲಹಳ್ಳಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ದೂರು ದಾಖಲಿಸಿದ ದಿನದಿಂದ ನನಗೆ ಪದೇ ಪದೆ ಫೋನ್ ಮಾಡಿ ಬೆದರಿಕೆ ಹಾಕಲಾಗುತ್ತಿದೆ. ನನಗೆ ಜೀವ ಬೆದರಿಕೆಯಿದೆ. ಹಾಗಾಗಿ ಸೂಕ್ತವಾದ ಭದ್ರತೆ ಇಲ್ಲದಿರುವ ಕಾರಣಕ್ಕೆ ವಿಚಾರಣೆಗೆ ಇಂದು ಹಾಜರಾಗಲು ಸಾಧ್ಯವಿಲ್ಲ. ಭದ್ರತೆ ಒದಗಿಸಿದಲ್ಲಿ ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

News Desk
Times Of Bengaluru