ಮಾದಕ ವಸ್ತುಗಳ ಮಾರಾಟ; ನೈಜೀರಿಯಾ ಪ್ರಜೆ ಅರೆಸ್ಟ್

ಬೆಂಗಳೂರು: ಜೆಸಿ ನಗರ ಮತ್ತು ಸಂಜಯನಗರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಓರ್ವ ನೈಜೀರಿಯನ್​ ಪ್ರಜೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 60 ಗ್ರಾಂ ವೀಡ್​ ಆಯಿಲ್​, 1.1ಕೆಜಿ ಗಾಂಜಾ, 2.8 ಗ್ರಾಂ ಕೊಕೇನ್​ ಸೇರಿದಂತೆ 2 ಕಾರು, 2 ಲ್ಯಾಪ್​ಟಾಪ್​ಗಳನ್ನು ಜಪ್ತಿ ಮಾಡಿದ್ದಾರೆ.​ನೈಜಿರಿಯನ್ ಮೂಲದ ನ್ವಾನ್ಯಾ ಫ್ರಾನ್ಸಿಸ್ ಬೋರ್ಟೆಂಗ್ ಎಂಬಾತನೇ ಈ ಜಾಲದ ಕಿಂಗಪಿನ್ ಆಗಿದ್ದಾನೆ ಎನ್ನಲಾಗಿದೆ. ವಿದ್ಯಾಭ್ಯಾಸದ ವೀಸಾದಡಿಯಲ್ಲಿ ಬೆಂಗಳೂರಿಗೆ ಬಂದಿದ್ದ. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ ಎನ್ನಲಾಗಿದೆ.

NEWS DESK

TIMES OF BENGALURU