ಬೆಂಗಳೂರು: ಅಕ್ರಮವಾಗಿ ಚಿನ್ನಾಭರಣ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಎಸ್ ಜ್ಯುವೆಲರಿ ಕಂಪೆನಿಗೆ 56 ಲಕ್ಷ ರೂ. ದಂಡ ವಿಧಿಸಲಾಗಿದೆ. ಎಸ್ಎಸ್ ಜ್ಯುವೆಲರಿ ಕಂಪೆನಿಗೆ ಜಿಎಸ್ಟಿ ಅಧಿಕಾರಿಗಳು ದಂಡ ವಿಧಿಸಿದ್ದಾರೆ.. 56 ಲಕ್ಷ ದಂಡ ಸೇರಿ ಒಟ್ಟು 64.27 ಲಕ್ಷವನ್ನ ಎಸ್ಎಸ್ ಜ್ಯುವೆಲರಿ ಕಂಪೆನಿ ಪಾವತಿಸಿದೆ. ಸದ್ಯ, ಈ ಕೇಸ್ ಬಗ್ಗೆ ಐಟಿ ಇಲಾಖೆ ತನಿಖೆ ನಡೆಸುತ್ತಿದೆ. 2020ರ ನವೆಂಬರ್ನಲ್ಲಿ ಕೆ.ಆರ್.ಮಾರ್ಕೆಟ್ ಮೂಲಕ ಬೈಕ್ನಲ್ಲಿ ಇಬ್ಬರು ಆರೋಪಿಗಳಿಂದ ಚಿನ್ನ ಸಾಗಾಟ ಮಾಡುತ್ತಿದ್ದರು.. ಈ ವೇಳೆ ಕೆಆರ್ ಮಾರ್ಕೆಟ್ ಪೊಲೀಸರು ಒಟ್ಟು 6.5 ಕೆಜಿ ಚಿನ್ನಾಭರಣ ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು ಎನ್ನಲಾಗಿದೆ.
NEWS DESK
TIMES OF BENGALURU