ಐಐಎಸ್ ಸಿ ಸಂಶೋಧನಾ ಕ್ರಮಗಳಿಗೆ ಪ್ರಧಾನಿ ಮೆಚ್ಚುಗೆ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ ಸ್ನಾತಕೋತ್ತರ ವೈದ್ಯಕೀಯ ಶಾಲೆ ಹಾಗೂ ಸಂಶೋಧನಾ ಆಸ್ಪತ್ರೆಯನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಎದುರು ಮಂಡಿಸಿದೆ. ಐಐಎಸ್ ಸಿ ಬೆಂಗಳೂರಿನ ನಿರ್ದೇಶಕ ಜಿ ರಂಗರಾಜನ್ ಯೋಜನೆಯನ್ನು ವಿವರಿಸಿದ್ದಾರೆ. ಇದೇ ವೇಳೆ ಕೋವಿಡ್-19 ನಿರ್ವಹಣೆ ಹಾಗೂ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿಯೆಡೆಗೆ ಸಂಸ್ಥೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ್ದಾರೆ.

ಸರ್ಕಾರಿ ಅನುದಾನಿತ 100 ತಾಂತ್ರಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದಾಗ ಐಐಎಸ್ ಸಿ ಮುಖ್ಯಸ್ಥರು ಸಂಸ್ಥೆಯ ಕ್ರಮಗಳನ್ನು ವಿವರಿಸಿದ್ದು, ಈ ಕುರಿತು ಮೋದಿಯೂ ಟ್ವೀಟ್ ಮಾಡಿದ್ದು, ಐಐಎಸ್ ಐಯ ಕೋವಿಡ್-19 ನಿರ್ವಹಣಾ ಕ್ರಮಗಳನ್ನು ಮೋದಿ ಒಪ್ಪಿಕೊಂಡಿದ್ದು, ಆತ್ಮನಿರ್ಭರ್ ಭಾರತ ದೃಷ್ಟಿಕೋನದಲ್ಲಿ ಆರೋಗ್ಯ ಕ್ಷೇತ್ರದೆಡೆಗೆ ಹೆಚ್ಚಿನ ಒತ್ತು ನೀಡಬೇಕೆಂಬ ಐಐಎಸ್ ಸಿಯ ಸಲಹೆಯನ್ನು ಉಲ್ಲೇಖಿಸಿದ್ದಾರೆ.

NEWS DESK

TIMES OF BENGALURU