ಗಾಂಜಾ ಮಾರುತ್ತಿದ್ದ 6 ದುಷ್ಕರ್ಮಿಗಳ ಬಂಧನ

ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ 6 ದುಷ್ಕರ್ಮಿಗಳನ್ನು ಬೆಂಗಳೂರು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ 28 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇನ್ಸ್ ಪೆಕ್ಟರ್ ಜಿ.ಲಕ್ಷ್ಮೀಕಾಂತಯ್ಯ ನೇತೃತ್ವದ ತಂಡವು ಜುಲೈ 7 ರಂದು ಹೆಚ್.ಎ.ಎಲ್. ಮತ್ತು ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಡ್ರಗ್ ಪೆಡ್ಲರ್ ಗಳ ಎರಡು ಜಾಲಗಳ ಮೇಲೆ ಪ್ರತ್ಯೇಕ ದಾಳಿ ಕಾರ್ಯಾಚರಣೆ ನಡೆಸಿದರು. ಈ ದಾಳಿಯಲ್ಲಿ ಆಂಧ್ರದಿಂದ ಬೆಂಗಳೂರಿಗೆ ಗಾಂಜಾ ತಂದು, ಸರಬರಾಜು ಮತ್ತು ಮಾರಾಟದಲ್ಲಿ ತೊಡಗಿದ್ದ ಒಬ್ಬ ಘಾನಾ ದೇಶದ ಪ್ರಜೆ, ಇಬ್ಬರು ಆಂಧ್ರಪ್ರದೇಶದವರನ್ನು ಮತ್ತು 3 ಜನ ಬೆಂಗಳೂರಿನ ನಿವಾಸಿಗಳನ್ನು ಬಂಧಿಸಲಾಯಿತು.

NEWS DESK

TIMES OF BENGALURU