ಮಹಿಳೆಯ ಕತ್ತು ಸೀಳಿ ಕೊಲೆ

ಬೆಂಗಳೂರು : ಜುಲೈ 10 ರಂದು ಜ್ಞಾನಜ್ಯೋತಿ ನಗರದಲ್ಲಿ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಇಂದು ಬೆಳಗ್ಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಜು, ಇಂದಿರಮ್ಮ ಬಂಧಿತ ಆರೋಪಿಗಳಾಗಿದ್ದಾರೆ.

ರಂಜಿತಾ (26) ಕೊಲೆಯಾದ ಮಹಿಳೆ. ಮೃತ ರಂಜಿತಾ ಮತ್ತು ಆಕೆಯ ಪತಿ ಓಂಕಾರ್​ ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿಗಳು ವಾಸವಿದ್ದರು. ಮೊಬೈಲ್ ಮತ್ತು ಚಿನ್ನಾಭರಣಕ್ಕಾಗಿ ರಂಜಿತಾಳನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

NEWS DESK

TIMES OF BENGALURU