ಶಾಲೆ ಮುಂದೆ ಮುಷ್ಕರ ಕುಳಿತ ಪೋಷಕರು

ಬೆಂಗಳೂರು : ಕೊರೊನಾ ಹೊಡೆತಕ್ಕೆ ಜನ ಸಾಮಾನ್ಯರು ಹಾಗೂ ಶೈಕ್ಷಣಿಕ ವರ್ಗ ಪೆಟ್ಟು ತಿಂದಿದೆ. ಒಂದು ಕಡೆ ಶಾಲಾರಂಭ ಮಾಡಿಲ್ಲದೇ ಆರ್ಥಿಕ‌ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳು ಮತ್ತೊಂದು ಕಡೆ ಕೋವಿಡ್ ಹೊಡೆತಕ್ಕೆ ಸಿಲುಕಿ ನಿರೋದ್ಯೋಗಿಗಳಾಗಿರುವ ಪೋಷಕರು. ಇವರಿಬ್ಬರ ಮಧ್ಯೆ ಶಾಲಾ ಶುಲ್ಕ ಜಟಾಪಟಿ ಯಾಕೋ ಮುಗಿಯುವ ಹಾಗೇ ಕಾಣ್ತಿಲ್ಲ. ನಗರದ ಹೆಬ್ಬಾಳದಲ್ಲಿರುವ ಜೈನ್ ಹೆರಿಟೇಜ್ ಸ್ಕೂಲ್​ನಲ್ಲಿ ಫೀಸ್ ಟಾರ್ಚರ್ ನೀಡುತ್ತಿದ್ದರೆಂದು ಪೋಷಕರು ಶಾಲಾ ಮುಂಭಾಗವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆನ್​ಲೈನ್ ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕ ಕಟ್ಟುವಂತೆ ಆಡಳಿತ ಮಂಡಳಿಯಿಂದ ಒತ್ತಡ ಬರುತ್ತಿದೆ. ಫೀಸ್ ಕಟ್ಟಿಲ್ಲ ಅಂದರೆ ಆನ್​ಲೈನ್‌ ಕ್ಲಾಸ್ ಕಡಿತ ಮಾಡುವ ಎಚ್ಚರಿಕೆಯನ್ನ‌ ನೀಡಿದ್ದಾರೆ.

ಹೀಗಾಗಿ, ಇದರಿಂದ ಬೇಸತ್ತ ಪೋಷಕರು ಧರಣಿ ಕೂತು ಪ್ರಿನ್ಸಿಪಾಲ್ ಡೌನ್ ಡೌನ್ ಅಂತಾ ಕೂಗುತ್ತಿದ್ದಾರೆ.‌ ಸದ್ಯ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು, ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇತ್ತ, ಸಹಕಾರ ನಗರ ಸಮೀಪದಲ್ಲಿರುವ ನಾರಾಯಣ ಒಲಂಪಿಯಾಡ್ ಶಾಲೆಯಲ್ಲೂ ಶುಲ್ಕ‌ ಒತ್ತಡ ವಿರೋಧಿಸಿ ಪೋಷಕರು ಮುಷ್ಕರ ನಡೆಸಲು ಮುಂದಾಗುತ್ತಿದ್ದಾರೆ‌.

NEWS DESK

TIMES OF BENGALURU