ನಟ ದರ್ಶನ್ ಗೆ  ವಂಚನೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್

ಬೆಂಗಳೂರು : ನಟ ದರ್ಶನ್ ಗೆ ರೂ.25 ಕೋಟಿ ಲೋನ್ ರೂಪದಲ್ಲಿ ವಂಚನೆ ಮಾಡೋದಕ್ಕೆ ಪ್ರಯತ್ನ ಪಟ್ಟಂತೆ, ಇಂದು ಸಂಜೆ 5ಕ್ಕೆ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಆಪ್ತರೊಬ್ಬರಿಂದ ಅರುಣ್ ಕುಮಾರಿಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಡಲಿದ್ದಾರೆ. ಈ ಮೂಲಕ ನಟ ದರ್ಶನ್ ವಂಚನೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಚಿತ್ರಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರು, ನಟ ದರ್ಶನ್ ಗೆ ವಂಚನೆ ಪ್ರಕರಣ ಸಂಬಂಧ 5 ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ ಪ್ರಸಾದ್ ಅವರ ಸ್ನೇಹಿತರೊಬ್ಬರು ಅರುಣ್ ಕುಮಾರಿ ಬಗ್ಗೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

NEWS DESK

TIMES OF BENGALURU